ಗ್ರೇಡ್ : 2 ಥೀಮ್ : ಪ್ರಾಣಿ ಪ್ರಪಂಚ
Grade : 2 Theme : ANIMAL KINGDOM
G2-EVS-LO-8- ಪ್ರಾಣಿಗಳ ವಿವಿಧ ಆಹಾರ ಪದ್ಧತಿಗಳ ಬಗ್ಗೆ ವಿವರಿಸಿ.
G2-EVS-LO-8- Describe about different food habits of animals
ಪರಿಚಯ: Introduction :
ಚಟುವಟಿಕೆ : Activity :
ಚಟುವಟಿಕೆ -1 Activity-1
G2EVSLO8 ACTIVITY 1 KANNADA.pdf
ಇದೊಂದು ಮೋಜಿನ ಚಟುವಟಿಕೆಯಾಗಿದ್ದು, ನಾವು ಪ್ರಾಣಿಗಳ ಚಿತ್ರಗಳು ಮತ್ತು ಪ್ರಾಣಿಗಳ ಆಹಾರ ಪದಾರ್ಥಗಳ ಫೋಟೋಗಳನ್ನು ಬೆರೆಸಿದ್ದೇವೆ. ಮಕ್ಕಳು ಇವೆರಡನ್ನೂ ಊಹಿಸಬೇಕು. ಆ ಪ್ರಾಣಿ ಆ ಆಹಾರ ಪದಾರ್ಥವನ್ನು ತಿನ್ನುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಅವರು ಮಾತನಾಡಬಹುದು?
Which animal and which food ?
This is a fun activity where we have mixed the photos of one animal and one food item . children need to guess both of them. They can also talk about whether that animal eats that food item or not ?
ಚಟುವಟಿಕೆ – 2
ಈ ಚಟುವಟಿಕೆಯ ಹೆಸರು : “ಕಥೆ ಆಲಿಸಿ,ಪಾತ್ರ ಅಭಿನಯಿಸಿ”
ಅಗತ್ಯ ಸಂಪನ್ಮೂಲಗಳು: ಮೊಲ ಮತ್ತು ಸಿಂಹ ಕಥೆ – ಸಾಧ್ಯವಾದರೆ ಕಥೆಯ ಪುಸ್ತಕ ಅಥವಾ ಚಾರ್ಟ್ಗಳನ್ನು ಇಟ್ಟುಕೊಳ್ಳುವುದು)
ಚಟುವಟಿಕೆಯನ್ನು ಮಾಡುವ ವಿಧಾನ :ಶಿಕ್ಷಕರು ಮಕ್ಕಳಿಗೆ ಮೊಲ ಮತ್ತು ಸಿಂಹ ಕಥೆಯನ್ನು ಅಥವಾ ಬೇರಾವುದೇ ಉತ್ತಮ ಪ್ರಾಣಿಗಳ ಕಥೆಯನ್ನು ಹೇಳುವುದು.
ಕಥೆ ಹೇಳಿದ ನಂತರ ಪುನರ್ಮನನ ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳಿಗೆ ಕಥೆ ಅರ್ಥವಾಗಿದೆಯೇ ಎಂದು ತಿಳಿದುಕೊಳ್ಳುವುದು.
ನಂತರ, ಮಕ್ಕಳು ಆ ಕಥೆಯಒಂದೊಂದು ಪಾತ್ರವನ್ನು ಒಂದೊಂದು ಮಕ್ಕಳು ತೆಗೆದುಕೊಂಡು ಕಥೆಯನ್ನು ನಾಟಕರೂಪದಲ್ಲಿ ಅಭಿವ್ಯಕ್ತಿಸಲು ಅನುಕೂಲ ಮಾಡಿಕೊಡುವುದು.
ಚಟುವಟಿಕೆಯ ನಂತರ: ಮಕ್ಕಳಿಗೆ ಬೇರೆ ಯಾವ ಪ್ರಾಣಿಗಳ ಕಥೆಗಳು ಇಷ್ಟ ಅವುಗಳಲ್ಲಿ ಯಾವ ಪಾತ್ರ ಮತ್ತು ಏಕೆ ಇಷ್ಟ ಎಂದು ಅಭಿವ್ಯಕ್ತಿಸಲು ಅನುಕೂಲ ಮಾಡಿಕೊಡುವುದು. – ಧನ್ಯವಾದಗಳು.
G2-EVS-LO-8-1-ಕಥೆ ಆಲಿಸಿ-ಪಾತ್ರ ಅಭಿನಯಿಸಿ.MP3
ಚಟುವಟಿಕೆ 3 – ಪ್ರಾಣಿಗಳ ಹೆಸರನ್ನು ಆಲಿಸಿ ಮತ್ತು ಆಹಾರವನ್ನು ತಿಳಿಸಿ.
Activity 3 – listen the animal name and tell the food.
ಈ ಚಟುವಟಿಕೆಯ ಹೆಸರು : “ಪ್ರಾಣಿಯ ಹೆಸರು ಆಲಿಸು, ಆಹಾರ ತಿಳಿಸು ”
ಅಗತ್ಯ ಸಂಪನ್ಮೂಲಗಳು: ಭೂ, ಜಲ ಮತ್ತು ಉಭಯವಾಸಿ ಪ್ರಾಣಿಗಳ ಪಟ್ಟಿ.
ಚಟುವಟಿಕೆಯನ್ನು ಮಾಡುವ ವಿಧಾನ :ಈ ಚಟುವಟಿಕೆಯನ್ನು ಮಾಡಲು ತರಗತಿಯಲ್ಲಿನ ಮಕ್ಕಳನ್ನು 3 ಗುಂಪುಗಳನ್ನಾಗಿ ವಿಂಗಡಿಸಬೇಕು. ಒಂದೊಂದು ಗುಂಪಿಗೂ ಒಂದೊಂದು ಕಾರ್ಯವನ್ನು ನೀಡಬೇಕು. ಅಂದರೆ
ಮೊದಲನೇ ಗುಂಪಿನ ಮಕ್ಕಳು ಸಸ್ಯಹಾರಿ ಪ್ರಾಣಿಗಳು, ಅವುಗಳ ವಾಸ, ಆಹಾರ ಇನ್ನಿತರ ವಿಚಾರಗಳ ಕುರಿತಂತೆ ಬಗ್ಗೆ ಮಾತನಾಡುವುದು.
2ನೇ ಗುಂಪಿನ ಮಕ್ಕಳು ಮಾಂಸಹಾರಿ ಪ್ರಾಣಿಗಳ ಅವುಗಳ ವಾಸ, ಆಹಾರ ಇನ್ನಿತರ ವಿಷಯಗಳ ಬಗ್ಗೆ ಮಾತನಾಡುವುದು.
3ನೇ ಗುಂಪಿನ ಮಕ್ಕಳು ಮಿಶ್ರಹಾರಿ (ಸಸ್ಯಹಾರಿ ಮತ್ತು ಮಾಂಸಹಾರಿ ಏರಡನ್ನೂ ತಿನ್ನುವ ಪ್ರಾಣಿಗಳ ಬಗ್ಗೆ ಮಾತನಾಡುವುದು.
ಮಕ್ಕಳು ಮಾತನಾಡಿದ ನಂತರ ಅವರಿಗೆ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಬೇಕು.
ಶಿಕ್ಷಕರು ಯಾವುದಾದರೊಂದು ಪ್ರಾಣಿಯ ಹೆಸರನ್ನು ಹೇಳುವುದು. ಉದಾ: ಜಿಂಕೆ ಎಂದು ಹೇಳಿದರೆ, 1ನೇ ಗುಂಪಿನಿಂದ ಒಬ್ಬ ವಿದ್ಯಾರ್ಥಿ ಬಂದು ಜಿಂಕೆ ಹುಲ್ಲು, ಸೊಪ್ಪನ್ನು ತಿನ್ನುತ್ತದೆ. ಆದ್ದರಿಂದ ಇದನ್ನು ‘ಸಸ್ಯಹಾರಿ’ ಪ್ರಾಣಿ ಎನ್ನುತ್ತೇವೆ ಎಂದು ಹೇಳಿದರೆ, ಆ ಗುಂಪಿಗೆ 1 ಅಂಕ ದೊರೆಯುತ್ತದೆ.
ನಂತರ ಶಿಕ್ಷಕರು ‘ಸಿಂಹ’ ಎಂದು ಹೇಳಿದರೆ. 2ನೇ ಗುಂಪಿನಿಂದ ಒಬ್ಬ ವಿದ್ಯಾರ್ಥಿ ಬಂದು ಸಿಂಹ ಮಾಂಸವನ್ನು ತಿನ್ನುತ್ತದೆ. ಆದ್ದರಿಂದ ಇದನ್ನು ಮಾಂಸಹಾರಿ ಪ್ರಾಣಿ ಎಂದು ಕರೆಯುತ್ತೇವೆ. ಎಂದು ಹೇಳಬೇಕು. ಆಗ 2ನೇ ಗುಂಪಿಗೆ 1 ಅಂಕ ದೊರೆಯುತ್ತದೆ.
ನಂತರ ಶಿಕ್ಷಕರು ʼಕರಡಿʼ ಎಂದು ಹೇಳಿದರೆ, 3ನೇ ಗುಂಪಿನಿಂದ ಒಬ್ಬ ವಿದ್ಯಾರ್ಥಿ ಬಂದು, ಕರಡಿ ಹಣ್ಣುಗಳು ಮತ್ತು ಮಾಂಸವನ್ನು ತಿನ್ನುತ್ತದೆ. ಇದು ಒಂದು ಮಿಶ್ರಹಾರಿ ಪ್ರಾಣಿ ಎಂದು ಹೇಳಬೇಕು. ಆಗ3ನೇ ಗುಂಪಿಗೆ 1 ಅಂಕ ದೊರೆಯುತ್ತದೆ.
ಈ ರೀತಿ ಎಲ್ಲರಿಗಿಂತ ಅತ್ಯಂತ ಹೆಚ್ಚು ಅಂಕಗಳನ್ನು ಸಂಗ್ರಹಿಸುವ ಗುಂಪು ವಿಜೇತವಾಗುವರು.ವಿಜೇತರಾದ ಗುಂಪಿನ ಮಕ್ಕಳಿಗೆ ಎಲ್ಲರಿಂದ ದೊಡ್ಡ ಚಪ್ಪಾಳೆಯನ್ನು ಹಾಕಿಸಿರಿ.
ಚಟುವಟಿಕೆಯ ನಂತರ: ಮಕ್ಕಳು ನೋಡಿರುವ ಸಸ್ಯಾಹಾರಿ, ಮಾಂಸಹಾರಿ ಮತ್ತು ಮಿಶ್ರಹಾರಿ ಪ್ರಾಣಿಗಳು, ಅವುಗಳ ವಾಸ, ಆಹಾರ ಇವುಗಳ ಬಗ್ಗೆ ಹಂಚಿಕೊಳ್ಳಲು ಅನುಕೂಲ ಮಾಡಿಕೊಡಿ. – ಧನ್ಯವಾದಗಳು.
Divide the entire class into three groups . First group will be children who will tell about animals who eat only grass /vegetables /plants etc, second group of children will tell animals who eat flesh and third group will be children where animals who can eat anything .Teacher can name any animal and call one child to name its food . For example, if the teacher says Deer then the group 1child will come and answer Grass . every right answer team will get one pebble. Whichever team collects the highest number of pebbles will get the opportunity to sing a song for everyone.
G2-EVS-LO-8-2-ಪ್ರಾಣಿಯ ಹೆಸರು ಆಲಿಸು ಆಹಾರ ತಿಳಿಸು.MP3
ಚಟುವಟಿಕೆ 4- ಶಿಕ್ಷಕರಿಂದ ಕಥೆ ನಿರೂಪಣೆ ಮತ್ತು ಅದರ ಮೇಲೆ ಮಕ್ಕಳ ಪಾತ್ರ.
Activity 4– Story narration by teacher followed by kids role play on it.
ಚಟುವಟಿಕೆ – 4
ಈ ಚಟುವಟಿಕೆಯ ಹೆಸರು : “ಮಂಗಗಳ ಉಪವಾಸ”
ಅಗತ್ಯ ಸಂಪನ್ಮೂಲಗಳು:“ಮಂಗಗಳ ಉಪವಾಸ”ಈ ಕಥೆ
ಚಟುವಟಿಕೆಯನ್ನು ಮಾಡುವವಿಧಾನ :ಶಿಕ್ಷಕರು ಈ ಮುಂದಿನಂತೆ“ ಮಂಗಗಳ ಉಪವಾಸ”ದ ಕಥೆಯನ್ನು ಹೇಳುವುದು.
ಉಪವಾಸ ಎಂದರೇನು? ಉಪವಾಸ ಅಂದರೆ, ವೃತ ಅಂದರೆ ಇಡೀ ದಿನ ಏನನ್ನೂ ತಿನ್ನದೇ, ಕುಡಿಯದೇ ಇರುವುದಕ್ಕೆ ಉಪವಾಸ ಎನ್ನುತ್ತೇವೆ. ಇಡೀ ದಿನ ಮಂಗಗಳು ಏನೂ ತಿನ್ನದೇ ಉಪವಾಸ ಮಾಡಿರುವ ಬಗ್ಗೆ ಒಂದು ಕಥೆಯನ್ನು ನಾನು ನಿಮಗೆ ಹೇಳುತ್ತೇನೆ ಕೇಳುವಂತವರಾಗಿ ಎಂದು ತಿಳಿಸುತ್ತಾ ಕಥೆಯನ್ನು ಆರಂಭಿಸುವುದು.
ಒಂದು ಕಾಡಿನಲ್ಲಿ ತುಂಬಾ ಮಂಗಗಳು ವಾಸವಾಗಿದ್ದವು. ಆದರೆ ಅವುಗಳೆಲ್ಲಾ ತುಂಬಾ ದಪ್ಪವಾಗಿದ್ದವು. ಒಂದು ದಿನ ಮಂಗಗಳ ನಾಯಕ ಹೇಳಿತು ನಾವು ಈ ದಿನ ಎಲ್ಲರೂ ಉಪವಾಸ ಮಾಡಬೇಕಾದ ಅಗತ್ಯವಿದೆ. ನಾವೆಲ್ಲರೂ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಆಗ ಮಂಗಗಳು ಇಡೀ ದಿನ ಉಪವಾಸದಿಂದ ಕಳೆಯುವುದು ಹೇಗೆ ಎಂದು ಯೋಚಿಸಿದವು? ಸರಿ ಪ್ರಯತ್ನ ಮಾಡೋಣ ಎಂದು ಹೇಳಿದವು. ಮರುದಿನ ಬಂತು, ಈ ದಿನ ನಮ್ಮ ಉಪವಾಸವಿದೆ. ಈ ದಿನ ನಾವು ಏನೂ ತಿನ್ನುವಂತಿಲ್ಲ ಎಂದು ಮಂಗಗಳ ನಾಯಕ ಹೇಳಿತು. ಸ್ವಲ್ಪ ಸಮಯ ಕಳೆಯಿತು. ಮಂಗಗಳು ಸ್ವಲ್ಪ ಸಮಯ ಆಟ ಆಡಿದವು, ಸ್ಪಲ್ಪ ಸಮಯ ಕಥೆ ಕೇಳಿದವು ಈ ರೀತಿ ದಿನ ಕಳೆಯುತ್ತಾ ಇದ್ದಂತೆ ಎಲ್ಲರಿಗೂ ತುಂಬಾ ಹೊಟ್ಟೆ ಹಸಿವಾಗತೊಡಗಿತು. ಎಲ್ಲಾ ಮಂಗಗಳು ಒಂದಕ್ಕೊಂದು ಮುಖ ನೋಡುತ್ತಿದ್ದವು. ನಂತರ ಈಗ ನಾವು ಉಪವಾಸವನ್ನು ಬಿಡಲು ಎಲ್ಲರಿಗೂ ಊಟ ಸಿದ್ಧಪಡಿಸಿಬೇಕು ಎಂದು ನಾಯಕ ಮಂಗ ಹೇಳಿತು. ಆಗ ಎಲ್ಲಾ ಮಂಗಗಳು ಹೌದು ಹೌದು ಎಂದು ಹೇಳಿದವು. ನಂತರ ಎಲ್ಲಾ ಮಂಗಗಳು ಆಹಾರ ಹುಡುಕಲು ಪ್ರಾರಂಭಿಸಿದವು. ಎಲ್ಲಾ ಸೇರಿ ತುಂಬಾ ರುಚಿಕರವಾದ ಬಾಳೆ ಹಣ್ಣಿನ ಗೊಂಚಲನ್ನು ಸಂಗ್ರಹಿಸಿದವು. ನಾನು ಎಲ್ಲರಿಗೂ ಬಾಳೆಹಣ್ಣನು ಹಂಚಲಾ? ಏಕೆಂದರೆ ನಾವು ಉಪವಾಸ ಬಿಟ್ಟ ನಂತರ ಊಟ ಮಾಡಲು ಸಮಯ ವ್ಯರ್ಥ ಮಾಡುವುದು ಬೇಡ ಎಂದು ನಾಯಕನ ಪತ್ನಿ ರಾಣಿ ಮಂಗ ಹೇಳಿತು. ಆಗ ಹೌದು ಖಂಡಿತಾ ಸರಿ ಎಂದು ಎಲ್ಲಾ ಮಂಗಗಳು ಹೇಳಿದವು. ನಂತರ ನಾವು ಉಪವಾಸ ಬಿಟ್ಟ ನಂತರ ಎಷ್ಟೊಂದು ಹಸಿವಾಗುತ್ತದೆ ಅದಕ್ಕಾಗಿ ಬಾಳೆ ಹಣ್ಣನು ನಮ್ಮ ನಮ್ಮ ಹತ್ತಿರ ಇಟ್ಟುಕೊಳ್ಳಬಹುದಾ? ಎಂದು ಒಂದು ಯುವ ಮಂಗ ಚಂಗನೆ ಮುಂದೆ ನೆಗೆದು ಬಂದು ಕೇಳಿತು. ಆಗ ಎಲ್ಲಾ ಹಿರಿಯ ಮಂಗಗಳು ಹಾ ಹಾ ಖಂಡಿತಾ ಸರಿ ಎಂದು ಹೇಳಿದವು. ನಂತರ ಒಂದು ದಪ್ಪನಾಗಿದ್ದ ಹೀರಾ ಮಂಗ ಬಾಳೆಹಣ್ಣಿನ ಸಿಪ್ಪೆ ತೆಗೆದು ನನ್ನ ಬಳಿ ಇಟ್ಟುಕೊಳ್ಳುತ್ತೇನೆ, ಏಕೆಂದರೆ ಉಪವಾಸ ಬಿಟ್ಟ ತಕ್ಷಣ ಬಾಯಿಗೆ ಬಾಳೆಹಣ್ಣನ್ನು ಹಾಕಿಕೊಳ್ಳಬಹುದು ಎಂದು ಹೇಳಿತು. ಇದನ್ನು ಕೇಳಿದ ಎಲ್ಲಾ ಮಂಗಗಳು ತುಂಬಾ ಖುಷಿಯಾದವು. ದಪ್ಪನಾಗಿದ್ದ ಮಂಗವು ಬಾಳೆಹಣ್ಣನ್ನು ನೋಡಿ, ನನಗೆ ಈಗಲೇ ತುಂಬಾ ಹೊಟ್ಟೆ ಹಸಿವಾಗುತ್ತಿದೆ ಎಂದು ಹೇಳಿತು. ನಂತರ ಎಲ್ಲಾ ಮಂಗಗಳು ಬಾಳೆಹಣ್ಣಿನ ಸಿಪ್ಪೆಯನ್ನು ಸೀಳಿ ಹಾಕಿ, ಹಣ್ಣನ್ನು ತಮ್ಮ ತಮ್ಮ ಪಕ್ಕದಲ್ಲಿ ಇಟ್ಟುಕೊಂಡವು. ನಂತರ ಒಂದು ಪುಟಾಣಿ ಮಂಗವು ಅವರ ಅಪ್ಪನ ಬಳಿಹೀಗೆ ಹೇಳಿತು ʼಅಪ್ಪ ನನಗೆ ತುಂಬಾ ಹಸಿವಾಗುತ್ತಿದೆ. ಆದ್ದರಿಂದ ನಾನು ಸಿಪ್ಪೆ ತೆಗೆದಿರುವ ಬಾಳೆಹಣ್ಣನ್ನು ಬಾಯಲ್ಲಿ ಹಾಕಿಕೊಳ್ಳುತ್ತೇನೆ. ಯಾವಾಗ ಉಪವಾಸ ಮುಕ್ತಾಯವಾಗುತ್ತದೆಯೋ, ಆಗ ತಕ್ಷಣ ಬಾಳೆಹಣ್ಣನ್ನು ಅಗಿದು ನುಂಗುತ್ತೇನೆ ಎಂದು ಹೇಳಿತು. ಆಗ ಅಪ್ಪ ಮಂಗವು ನಾಯಕ ಮಂಗನ ಕಡೆಗೆ ನೋಡಿತು. ಆಗ ನಾಯಕನು ಹೇಳಿದ, ಗಮನದಲ್ಲಿಟ್ಟುಕೊಳ್ಳಿರಿ ಯಾರೂ ಬಾಳೆಹಣ್ಣನ್ನು ತಿನ್ನಬಾರದು. ಉಪವಾಸ ಮುಕ್ತಾಯವಾದ ನಂತರ ಎಲ್ಲರೂ ತಿನ್ನಬಹುದು ಎಂದಿತು. ನಂತರ ಪುಟಾಣಿ ಮಂಗವು ಆಕಡೆ-ಈಕಡೆ ನೋಡಿ ಪಟಕ್ಕನೆ ಬಾಳೆಹಣ್ಣನ್ನು ತನ್ನ ಬಾಯಿಗೆ ಹಾಕಿಕೊಂಡಿತು. ಇದನ್ನು ನೋಡಿದ ಎಲ್ಲಾ ಮಂಗಗಳೂ ಸಹ ಪಟಕ್ಕನೆ ತಮ್ಮ ಬಾಯಿಗೆ ಬಾಳೆಹಣ್ಣನ್ನು ಹಾಕಿಕೊಂಡವು. ಮಂಗಗಳ ಬಾಯಿಗೆ ಬಾಳೆಹಣ್ಣು ಹೋದ ನಂತರ ಬಾಳೆಹಣ್ಣಿನ ರುಚಿ ಮತ್ತು ಹಣ್ಣಿನ ಸುವಾಸನೆಯಿಂದ ಹೊಟ್ಟೆ ಹಸಿವು ಇನ್ನೂ ಜಾಸ್ತಿಯಾಯಿತು. ಎಲ್ಲಾ ಮಂಗಗಳು ಜೊಲ್ಲು ಸುರಿಸುತ್ತಾ ಗಪಾ ಗಪ್, ಗಪಾ ಗಪ್ ಎಂದು ಬಾಳೆಹಣ್ಣನ್ನು ತಿಂದವು. ಇದನ್ನು ನೋಡಿದ ನಾಯಕ ಮಂಗವು ಹಾ ಹಾ ಹ ಎಂದು ಜೋರಾಗಿ ನಗತೊಡಗಿತು. ಏಕೆಂದರೆ ಅವನಿಗೆ ಅರ್ಥವಾಯಿತು ಇವರು ಯಾರೂ ಉಪವಾಸ ಮಾಡಲಾರರು ಎಂದು. ನಂತರ ಎಲ್ಲಾ ಮಂಗಗಳು ಖುಷಿಯಿಂದ ಚಂಗ ಚಂಗನೆ ನೆಗೆಯತೊಡಗಿದವು.
ಕಥೆ ಹೇಳಿದ ನಂತರ ಮಕ್ಕಳಿಗೆ ಪುನರ್ಮನನ ಪ್ರಶ್ನೆಗಳನ್ನು, ಈ ಕಥೆಯ ಬಗ್ಗೆ ನಿಮಗೆ ಏನನಿಸಿತು? ಈ ಕಥೆಯಿಂದ ನೀವು ಏನು ಕಲಿತಿರಿ? ನೀವು ಯಾವಾಗಲಾದರೂ ಉಪವಾಸ ಮಾಡಿದ್ದೀರಾ? ಒಂದು ವೇಳೆ ಉಪವಾಸ ಮಾಡಿದರೆ, ಉಪವಾಸ ಮುಗಿದ ತಕ್ಷಣ ನೀವುಏನನ್ನು ತಿನ್ನಲು ಬಯಸುತ್ತೀರಾ? ಎಂಬ ಪ್ರಶ್ನೆಗಳನ್ನು ಕೇಳಿರಿ ಮತ್ತು ಮಕ್ಕಳು ಉತ್ತರಿಸಲು ಅನುಕೂಲ ಮಾಡಿಕೊಡಿ.
ಚಟುವಟಿಕೆಯ ನಂತರ: ಮಕ್ಕಳೇ, ಮುಂತಾದ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳೊಂದಿಗೆ ಚರ್ಚಿಸಿರಿ. – ಧನ್ಯವಾದಗಳು
Teacher can narrate the story to children. Once the story is done, children can also do a drama on it and answer questions asked by the teacher.
ಹೆಚ್ಚುವರಿ ಸಂಪನ್ಮೂಲಗಳು : Additional resources :
https://youtu.be/hW57awyt024?si=gb4Z4OLpyk6D6lMm
https://storyweaver.org.in/en/stories/365300-kya-khaen?mode=read
https://storyweaver.org.in/en/stories/133022-kaun-kya-khata-hai?mode=read
https://storyweaver.org.in/en/stories/22440-arey-yeh-sab-kaun-kha-gaya?mode=read
Eating habits of animals | Animals and their eating habits in Hindi | जानवर और उनकी खाने की आदतें
ಅಭ್ಯಾಸ : Practice :
ಅಭ್ಯಾಸ ಹಾಳೆ – 1 Practise sheet- 1
ಅಭ್ಯಾಸ ಹಾಳೆ – 2 Practise sheet- 2