ತರಗತಿ : 2 ಥೀಮ್ : ನನ್ನ ನೆರೆಹೊರೆ ಮತ್ತು ಸಮುದಾಯ.
Grade : 2 Theme : My neighborhood & community.
G2-EVS-LO–3. ವಿವಿಧ ಉದ್ಯೋಗಗಳು ಮತ್ತು ವೃತ್ತಿಗಳ ಪಾತ್ರ ಮತ್ತು ಕೆಲಸದ ಬಗ್ಗೆ ವಿವರಿಸಿ.
G2-EVS-LO-3. Describe about roles and work of different occupations and professions.
ಪರಿಚಯ : Introduction :
Reference for video
https://www.youtube.com/watch?v=VlepBxUsNII
ಚಟುವಟಿಕೆ :
ಚಟುವಟಿಕೆ 1
ಈ ಚಟುವಟಿಕೆಯ ಹೆಸರು: ನನ್ನ ಪತ್ರ, ನಮ್ಮ ಮನೆಗೆ
ಅಗತ್ಯಸಂಪನ್ಮೂಲಗಳು: ಅಂಚೆಪತ್ರ, ಪೆನ್ನು, ಸ್ಟ್ಯಾಂಪ್, (ಪ್ರತಿ ವಿದ್ಯಾರ್ಥಿ ಶಾಲೆಗೆ ಬರುವಾಗ, ತಮ್ಮ ಮನೆಯ ವಿಳಾಸ ಬರೆದಿರುವ ಒಂದು ಖಾಲಿ ಅಂಚೆಪತ್ರವನ್ನು ತೆಗೆದುಕೊಂಡು ಬರುವುದು.)
ಚಟುವಟಿಕೆಯನ್ನುಮಾಡುವವಿಧಾನ :ಎಲ್ಲಾ ಮಕ್ಕಳು ತಮ್ಮ ಮನೆಯಿಂದ ತಂದಿರುವ ಖಾಲಿ ಅಂಚೆ ಪತ್ರದಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ತಮ್ಮ ಶಾಲೆಯ ವಾರ್ಷಿಕ ಸಮಾರಂಭಕ್ಕೆ ಬರುವಂತೆ ಕೋರಿ, ಒಂದು ಪತ್ರವನ್ನು ಬರೆಯಲು ಬೆಂಬಲಿಸಿರಿ. ಅದರಲ್ಲಿ “ ಇವರಿಗೆ, ಇವರಿಂದ ವಿಳಾಸ, ದಿನಾಂಕ, ಪತ್ರದ ಆರಂಭ, ಪತ್ರದ ಮಧ್ಯದ ವಿಷಯ ಭಾಗ, ಪತ್ರದ ಮುಕ್ತಾಯ ಎಲ್ಲವನ್ನು ನಿಗದಿತ ಜಾಗಗಳಲ್ಲಿ ಮತ್ತು ಪತ್ರದ ವಿಷಯ ಭಾಗವನ್ನು ಸ್ವಾರಸ್ಯವಾಗಿ ವಿವರಿಸಿ ಬರೆಯಲು ಅನುಕೂಲ ಮಾಡಿಕೊಡಿ.
ಎಲ್ಲಾ ಮಕ್ಕಳು ತಮ್ಮ ತಮ್ಮ ಪತ್ರಗಳನ್ನು ಬರೆದ ನಂತರ ಶಿಕ್ಷಕರು ಪರಿಶೀಲಿಸುವುದು. ನಂತರ ಶಿಕ್ಷಕರು ಮಕ್ಕಳನ್ನು ಪಕ್ಕದಲ್ಲಿರುವ ಅಂಚೆ ಕಛೇರಿಗೆ ಕರೆದುಕೊಂಡು ಹೋಗಿ, ಅಂಚೆಪತ್ರಗಳನ್ನು ಪೋಸ್ಟ್ ಮಾಡಿಸುವುದು.
ಚಟುವಟಿಕೆಯ ನಂತರ: ಪತ್ರವು ಮಕ್ಕಳ ಮನೆಗೆ ತಲುಪಿದ ನಂತರ ಅದನ್ನು ಶಾಲೆಗೆ ವಾಪಸ್ ತರುವುದು ಮತ್ತು ಈ ಪತ್ರ ಪಡೆದ ನಂತರ ತಮ್ಮ ಪೋಷಕರು ಮತ್ತು ಮನೆಯವರು ವ್ಯಕ್ತಪಡಿಸಿದ ವಿಚಾರಗಳನ್ನು ಹಂಚಿಕೊಳ್ಳು ಮತ್ತು ಚರ್ಚಿಸಲು ಅನುಕೂಲ ಮಾಡಿಕೊಡಿ. ಧನ್ಯವಾದಗಳು
Activity :
Activity-1 – Post office visit
Every child will bring a self address written envelope from home. They will write/draw whatever they want for their family in school and post the letter from the post office along with teacher .Once they receive a letter,they can bring it back to school and show it to their peers.
G2EVSLO3 ACTIVITY 1 AUDIO G2-EVS-LO-3-1-ನನ್ನ ಪತ್ರ ನಮ್ಮ ಮನೆಗೆ
ಚಟುವಟಿಕೆ – 2.
ಈ ಚಟುವಟಿಕೆಯ ಹೆಸರು: ಧನ್ಯವಾದ ಪತ್ರ
ಅಗತ್ಯಸಂಪನ್ಮೂಲಗಳು: ಅಂಚೆಪತ್ರ, ಪೆನ್ನು, ಬಣ್ಣದ ಸ್ಕೆಚ್ ಪೆನ್ನುಗಳು
ಚಟುವಟಿಕೆಯನ್ನುಮಾಡುವವಿಧಾನ : ಮಕ್ಕಳು ಯಾರಿಗಾದರೂ ಧನ್ಯವಾದ ಅಥವಾ ಸಂತೋಷವನ್ನು ವ್ಯಕ್ತಪಡಿಸಲು ಬಯಸಿದರೆ ಅವರಿಗೆ ಒಂದು ಚಿತ್ತಾರವುಳ್ಳ ಪತ್ರವನ್ನು ಕಳುಹಿಸಲು ಅನುಕೂಲ ಮಾಡಿಕೊಡುವ ಚಟುವಟಿಕೆ ಇದು. ಮಕ್ಕಳು ತಂದಂತಹ ಕಾರ್ಡ್ನಲ್ಲಿ ಅವರಿಗಿಷ್ಟ ಇರುವ ಚಿತ್ರವನ್ನು ಚಿತ್ರಿಸಿ, ಬಣ್ಣ ತುಂಬಿ, ಮೂರ್ನಾಲ್ಕು ವಾಕ್ಯಗಳಲ್ಲಿ ಯಾರಿಗೆ ಮತ್ತು ಏಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ ಎಂದು ಬರೆಯಲು ಅನುಕೂಲ ಮಾಡಿಕೊಡಿ. ಆ ನಂತರ ʼಯಿಂದ, ಇವರಿಗೆ ವಿಳಾಸವನ್ನು ವರೆದು ಸಂಬಂಧಿಸಿದವರಿಗೆ ಪೋಸ್ಟ್ ಮಾಡಲು ಅಥವಾ ಅವರನ್ನು ಭೇಟಿಮಾಡಿ ಪತ್ರವನ್ನು ಕೊಡಲು ಅನುಕೂಲ ಮಾಡಿಕೊಡಿ.
ಚಟುವಟಿಕೆಯನಂತರ: ಸಂಬಂಧಿಸಿದವರಿಗೆ ಧನ್ಯವಾದಗಳ ಕಾರ್ಡ್ನ್ನು ಮಾಡಿದ ನಂತರ ಮಕ್ಕಳಿಗಾದ ಅನುಭವದ ಕುರಿತು ಚರ್ಚೆ ಮಾಡಲು ಅವಕಾಶ ಮಾಡಿಕೊಡಿರಿ.
Activity- 2. Thank you card
Let children make thank you cards for helpers around them for whom they feel gratitude.
They can say thank you by making them a card.
Additional resources:
https://storyweaver.org.in/en/stories/384726-guess-the-job?mode=read
Practice: