ತರಗತಿ – 2- ಥೀಮ್ : ಕುಟುಂಬ ಮತ್ತು ಸ್ನೇಹಿತರು
Grade : 2 – Theme: Family & Friends
G2-EVS-LO-2 : ಕುಟುಂಬ ಸದಸ್ಯರ ಕೆಲಸ ಮತ್ತು ಪಾತ್ರಗಳನ್ನು ವಿವರಿಸಿ. (ಸ್ವಯಂ ಸೇರಿದಂತೆ)
G2-EVS-LO-2. Describe work and roles of family members (including self)
ಪರಿಚಯ : Introduction:
G2-EVS-LO-2-1-ಕುಟುಂಬದ ಜವಾಬ್ದಾರಿಗಳ ನಿರ್ವಹಣೆ
G2-EVS-LO-2-1-ಕುಟುಂಬದ ಜವಾಬ್ದಾರಿಗಳ ನಿರ್ವಹಣೆ.MP3
Activity : ಚಟುವಟಿಕೆ :
ಚಟುವಟಿಕೆ – 1
ಈ ಚಟುವಟಿಕೆಯ ಹೆಸರು: “ಕುಟುಂಬದ ಜವಾಬ್ದಾರಿಗಳ ನಿರ್ವಹಣೆ”
ಅಗತ್ಯ ಸಂಪನ್ಮೂಲಗಳು: ಸೀಮೆಸುಣ್ಣ, ಕಪ್ಪುಹಲಗೆ
ಚಟುವಟಿಕೆಯನ್ನು ಮಾಡುವ ವಿಧಾನ :ಈ ಚಟುವಟಿಕೆ ಮಕ್ಕಳು ಕುಟುಂಬದ ಸದಸ್ಯರು ನಿರ್ವಹಿಸುವ ವಿಭಿನ್ನ ಜಬ್ದಾರಿಗಳ ಬಗ್ಗೆ ಕಲಿಯಲು ಒಂದು ಮನರಂಜನೆಯ ಆಟವಾಗಿದೆ. ಮೊದಲು 5-6 ಮಕ್ಕಳನ್ನು ಒಳಗೊಂಡಿರುವ ಚಿಕ್ಕ ಚಿಕ್ಕ ಗುಂಪುಗಳನ್ನಾಗಿ ವಿಭಜಿಸಿರಿ ಮತ್ತು ಪ್ರತಿಯೊಂದು ಗುಂಪಿಗೆ ಒಂದೊಂದು ಕುಟುಂಬ ಸದಸ್ಯರ ಜವಾಬ್ದಾರಿಗಳನ್ನು ಚರ್ಚಿಸಿ, ಪಟ್ಟಿಮಾಡಿ ನಂತರ ಎಲ್ಲರಿಗೂ ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ನೀಡಿರಿ. ಉದಾ: 1ನೇ ಗುಂಪಿಗೆ ತಂದೆ-ತಾಯಿಯರ ಜವಾಬ್ದಾರಿಗಳು, 2ನೇ ಗುಂಪಿಗೆ ಮಕ್ಕಳ ಜವಾಬ್ದಾರಿಗಳು ಮತ್ತು 3ನೇ ಗುಂಪಿಗೆ ಅಜ್ಜ-ಅಜ್ಜಿಯರ ಜವಾಬ್ದಾರಿಗಳನ್ನು ಪಟ್ಟಿ ಮಾಡಲು ತಿಳಿಸಿರಿ. ಆ ನಂತರ ಒಂದೊಂದೇ ಗುಂಪು ಮುಂದೆ ಬಂದು ತಾವು ಪಟ್ಟಿ ಮಾಡಿರುವ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡಿ.
ಚಟುವಟಿಕೆಯ ನಂತರ: ಈ ಚಟುವಟಿಕೆಯ ನಂತರ ಮಕ್ಕಳು ತಮ್ಮ ಕುಟುಂಬಗಳ ಸದಸ್ಯರು ಪ್ರತಿದಿನ ಯಾವೆಲ್ಲಾ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಹಂಚಿಕೊಳ್ಳಲು ಅನುಕೂಲ ಮಾಡಿಕೊಡಿ. – ಧನ್ಯವಾದಗಳು.
Activity – 1 :
Play a family role-playing game. This is a fun way for children to learn about the different roles that family members play. We can divide the children into groups and give each group a different family role to act out. For example, one group could be the parents, another group could be the children, and another group could be the grandparents. Have the children act out what they think their family members do in their everyday lives.
G2-EVS-LO-2-2-ಕುಟುಂಬದ ವಂಶವೃಕ್ಷ ರಚಿಸುವುದು
ಚಟುವಟಿಕೆ – 2:
ಈ ಚಟುವಟಿಕೆಯ ಹೆಸರು: “ಕುಟುಂಬದ ವಂಶವೃಕ್ಷ ರಚಿಸುವುದು”
ಅಗತ್ಯ ಸಂಪನ್ಮೂಲಗಳು: ಬಿಳಿಯಹಾಳೆ ಅಥವಾ ಕೆ.ಜಿ. ಶೀಟ್, ಗೊಂದು ಅಥವಾ ಗಮ್, ಮಾರ್ಕರ್, ಕುಟುಂಬ ಸದಸ್ಯರ ಫೋಟೋಗಳು.
ಚಟುವಟಿಕೆಯನ್ನು ಮಾಡುವ ವಿಧಾನ: ಚಟುವಟಿಕೆಗೂ ಮುಂಚಿತವಾಗಿ ಮಕ್ಕಳು ತಮ್ಮ ಕುಟುಂಬ ಸದಸ್ಯರೆಲ್ಲರ ಪಾಸ್ ಪೋರ್ಟ್ ಫೋಟೋಗಳನ್ನು ಸಂಗ್ರಹಿಸಿ ತರಲು ತಿಳಿಸಿರಿ. ಬಿಳಿಯ ಹಾಳೆ/ ಕೆಜಿ ಶೀಟ್ನಲ್ಲಿ ರೆಂಬೆ ಕೊಂಬೆಗಳಿರುವ ಒಂದು ಮರದ ಚಿತ್ರವನ್ನು ರಚಿಸಲು ಅನುಕೂಲ ಮಾಡಿಕೊಡಿ. ಆ ನಂತರ ಮಕ್ಕಳು ಮರದ ತೊಗಟೆಯಿಂದ ಆರಂಭವಾಗುವ ರೆಂಬೆ-ಕೊಂಬೆಗಳಿಗೆ ಅಜ್ಜಿ-ತಾತ, ಆ ನಂತರದ ರೆಂಬೆಗಳಿಗೆ ಅಪ್ಪ -ಅಮ್ಮ ಮತ್ತು ಅದರಿಂದ ಚಿಗರೊಡೆದ ಕೊಂಬೆಗಳಿಗೆ ಮಕ್ಕಳು, ಅಂದರೆ ಅಣ್ಣ-ತಂಗಿ, ಅಕ್ಕ-ತಮ್ಮ ಹೀಗೆ ಅಂಟಿಸುತ್ತಾ ಕುಟುಂಬದ ವಂಶವೃಕ್ಷವನ್ನು ರಚಿಸುವುದು. ಹೀಗೆ ರಚಿಸಿದ ನಂತರ ಫೋಟೋಗಳ ಕೆಳಭಾಗದಲ್ಲಿ ಸದಸ್ಯರ ಹೆಸರು, ವಯಸ್ಸು ಮತ್ತು ಮಗುವಿನೊಂದಿಗಿರುವ ಸಂಬಂಧವನ್ನು ಬರೆಯಲು ಅನುಕೂಲ ಮಾಡಿಕೊಡುವುದು. (ಈ ಚಟುವಟಿಕೆ ಮಾಡಿಸಲು ಅನುಕೂಲವಾಗುವಂತೆ ಒಂದು ಯೂಟ್ಯೂಬ್ ಲಿಂಕ್ ನ್ನು ಹಂಚಿಕೊಳ್ಳಲಾಗಿದೆ )
ಚಟುವಟಿಕೆಯನಂತರ: ಮಕ್ಕಳ ಕುಟುಂಬದಲ್ಲಿರುವ ಸದಸ್ಯರೊಂದಿಗಿರುವ ಸಂಬಂಧ ಮತ್ತು ಅವರೊಂದಿಗಿನ ಮಧುರ ಸಂಬಂಧವನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡಿ.- ಧನ್ಯವಾದಗಳು
Activity – 2 : Make a family tree.We can use a blank piece of paper, markers, and glue to create a family tree. Have the children draw pictures of their family members and write their names underneath. You can also add other information, such as the family members’ ages, jobs, and what all they do at home.
ಚಟುವಟಿಕೆ – 3
ಮಕ್ಕಳೇ, ಈ ದಿನ ನಾವು ಕುಟುಂಬದ ವಿಭಿನ್ನ ಸದಸ್ಯರು ಮತ್ತು ಅವರ ಜವಾಬ್ದಾರಿಗಳ ಬಗ್ಗೆ ಮಾತನಾಡೋಣ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಬೇರೆ ಬೇರೆ ಜವಾಬ್ದಾರಿಗಳಿವೆ. ತಾಯಿ-ತಂದೆ ತಮ್ಮ ಮಕ್ಕಳ ಪಾಲನೆ-ಪೋಷಣೆ ಮಾಡುತ್ತಾರೆ. ಮಕ್ಕಳು ಸುರಕ್ಷಿವಾಗಿರುವುದು ಮತ್ತು ಉತ್ತಮ ನಾಗರೀಕರಾಗಿರಲು ಬೇಕಾಗಿರುವ ಎಲ್ಲಾ ಗುಣಗಳು ಇರುವುದನ್ನು ಖಾತ್ರಿ ಪಡಿಸುತ್ತಾರೆ. ತಾಯಿ-ತಂದೆಯರು ಅಡುಗೆ ಸಹ ಮಾಡುತ್ತಾರೆ. ಮನೆಯನ್ನು ಸ್ವಚ್ಛವಾಗಿ ಇಡುತ್ತಾರೆ ಹಾಗೂ ಮಕ್ಕಳ ಮನೆಕೆಲಸಕ್ಕೆ ಬೆಂಬಲ ಕೊಡುತ್ತಾರೆ. ಮಕ್ಕಳು ನಮ್ಮ ದೈನಂದಿನ ಕೆಲಸಕ್ಕೆ ಸಹಾಯ ಮಾಡುತ್ತಾರೆ, ನಾವು ಹೇಳಿದ ಮಾತನ್ನು ಕೇಳುತ್ತಾರೆ, ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಮಾಡುತ್ತಾರೆ, ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತಾರೆ ಎಂಬ ಬಗ್ಗೆ ಮಕ್ಕಳ ಮೇಲೆ ಭರವಸೆ ಇಡುತ್ತಾರೆ. ಅಜ್ಜ-ಅಜ್ಜಿ ಕುಟುಂಬಲ್ಲಿ ಹಿರಿಯರಾಗಿರುತ್ತಾರೆ. ಇಡೀ ಕುಟುಂಬ ಸರಿಯಾದ ಮಾರ್ಗದಲ್ಲಿ ಹೋಗುವಂತೆ ಮಾರ್ಗದರ್ಶನ ನೀಡುತ್ತಾರೆ. ನಮ್ಮನ್ನು ಪ್ರೀತಿಸುತ್ತಾರೆ ಮತ್ತು ನಮ್ಮ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಕುಟುಂಬದ ಎಲ್ಲಾ ಸದಸ್ಯರು ಪರಸ್ಪರ ಪ್ರೀತಿಸುತ್ತಾರೆ ಮತ್ತು ಪರಸ್ಪರ ಬೆಂಬಲ ಒದಗಿಸುತ್ತಾರೆ. ನೀವು ನಿಮ್ಮ ಕುಟುಂಬದಲ್ಲಿ ನಿಮ್ಮ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತೀರಿ ಅಲ್ವಾ – ಧನ್ಯವಾದಗಳು.
वंश – वृक्ष | Family Tree | हिन्दी | Pre-Primary II (5-6 years)
G2-EVS-LO-2-3-ಕುಟುಂಬದ ವಿಭಿನ್ನ ಸದಸ್ಯರ ಜವಾಬ್ದಾರಿಗಳು
ಹೆಚ್ಚುವರಿ ಸಂಪನ್ಮೂಲಗಳು : Additional resources:
Role play of Family members/ home duties of members of family/ Role for kg kids…..
Roles and responsibilities of family members | class2 EVS| NCERT
ಅಭ್ಯಾಸ :
Practice:
https://www.liveworksheets.com/w/en/english-language/385031
ಅಭ್ಯಾಸ ಹಾಳೆ – 1 Practice Sheet – 1
ಭ್ಯಾಸ ಹಾಳೆ – 2 Practice Sheet – 2