ಗ್ರೇಡ್ : 2 ಥೀಮ್: ಸಸ್ಯ ಸಾಮ್ರಾಜ್ಯ
Grade : 2 Theme: Plant Kingdom
G2-EVS-LO-11 : ವಿವಿಧ ಮರಗಳು ಮತ್ತು ಸಸ್ಯಗಳ ಉಪಯುಕ್ತತೆಯನ್ನು ವಿವರಿಸಿ.
G2-EVS-LO-11 : Describe about usefulness of different trees and plants.
ಚಟುವಟಿಕೆ 1 – ಕಥೆಯ ಸಮಯ
Activity 1 – STORY TIME
Neevu-endaadaroo-Mara-Hatthiddeeraa.pdf
ಚಟುವಟಿಕೆಯ ಹೆಸರು : “ನೀವು ಯಾವಾಗಲಾದರೂ ಮರವನ್ನು ಹತ್ತಿದ್ದೀರಾ?”
ಅಗತ್ಯ ಸಂಪನ್ಮೂಲಗಳು: “ನೀವು ಯಾವಾಗಲಾದರೂ ಮರವನ್ನು ಹತ್ತಿದ್ದೀರಾ?” ಎಂಬ ಕಥೆಪುಸ್ತಕ ಅಥವಾ ಕಥೆಯ ಯೂಟ್ಯೂಬ್ ಲಿಂಕ್. ನಾವು ಲಿಂಕ್ನ್ನು ಈಗಾಗಲೇ ನೀಡಿದ್ದೇವೆ.
ಚಟುವಟಿಕೆಯನ್ನು ಮಾಡುವ ವಿಧಾನ :“ನೀವು ಯಾವಾಗಲಾದರೂ ಮರವನ್ನು ಹತ್ತಿದ್ದೀರಾ?” ಎಂಬ ಕಥೆಯು ಒಬ್ಬ ಪುಟ್ಟ ಹುಡುಗಿ ರಿಂಕಿ ಮರ ಹತ್ತುವ ಕುರಿತು ಸೊಗಸಾಗಿ ಬಣ್ಣಿಸಲಾಗಿದೆ. ಈ.ಕಥೆಯನ್ನು ಚಿತ್ರ ತೋರಿಸುವುದರ ಮೂಲಕ ಹೇಳಿರಿ. ಆ ನಂತರ ಮಕ್ಕಳು ಎಂದಾದರೂ ಮರ ಹತ್ತಿದ್ದಾರೆಯೇ? ಹೌದಾದರೆ ಯಾವ ಮರ, ಅನುಭವ ಹೇಗಿತ್ತು ಎಂಬುದರ ಬಗ್ಗೆ ಚರ್ಚಿಸಲು ಅನುಕೂಲ ಮಾಡಿಕೊಡಿ.
ಚಟುವಟಿಕೆಯ ನಂತರ: ವಿಭಿನ್ನ ಮರಗಳು, ಅವುಗಳನ್ನು ಉಪಯೋಗಗಳ ಬಗ್ಗೆ ಚರ್ಚಿಸುವುದು. ನಂತರ ಶಿಕ್ಷಕರ ಸಹಾಯದೊಂದಿಗೆ ಮಕ್ಕಳು ಶಾಲೆಯ ಪರಿಸರ ಮತ್ತು ಅಕ್ಕ-ಪಕ್ಕ ಇರುವ ಮರಗಳನ್ನು ಹತ್ತುವ ಅಭ್ಯಾಸ ಮಾಡಲು ಅನುಕೂಲ ಮಾಡಿಕೊಡುವುದು. – ಧನ್ಯವಾದಗಳು.
We are reading a story about a little girl, Riniki, who loves climbing.
The title of this story is ‘Have you ever climbed a tree?’
Teacher can read the story and talk about how different trees have different significance For example, jackfruit trees are easy to climb because they have strong branches that anyone can handle but paan trees are difficult to climb because their branches are not strong.Plant life is all around us.how important it is to have trees around us can be discussed with children.Children can also try climbing trees nearby or within school campus with teacher.
G2-EVS-LO-11-1-ನೀವು ಯಾವಾಗಲಾದರೂ ಮರವನ್ನು ಹತ್ತಿದ್ದೀರಾ.MP3
ಚಟುವಟಿಕೆ – 2
ಈ ಚಟುವಟಿಕೆಯ ಹೆಸರು : “ನಿಮಗೆ ಗೊತ್ತಾ ಮರಗಳ ಮಹತ್ವ”?
ಅಗತ್ಯಸಂಪನ್ಮೂಲಗಳು:ಮರಗಳಿಂದ ಸಿಗುವ ಅಥವಾ ಮರದಿಂದ ಮಾಡಲಾದ ವಸ್ತುಗಳು. ಉದಾ: ಹಣ್ಣು, ಕಾಗದ, ರಬ್ಬರ್, ಎಲೆ, ಕಡ್ಡಿಯ ತುಂಡು, ತರಕಾರಿ.
ಮರಗಳಿಂದ ಮಾಡದಿರುವ ಪ್ಲಾಸ್ಟಿಕ್ ಗೊಂಬೆ, ಸ್ಟೀಲ್ ಪಾತ್ರೆಗಳು, ಇಟ್ಟಿಗೆ, ಕಲ್ಲು, ಸೀಮೆಸುಣ್ಣ, ಕಬ್ಬಿಣ ಇತ್ಯಾದಿ.
ಚಟುವಟಿಕೆಯನ್ನು ಮಾಡುವ ವಿಧಾನ :ಮರಗಳಿಂದ ಸಿಗುವ ಅಥವಾ ಮರದಿಂದ ಮಾಡಲಾದ ವಸ್ತುಗಳಾದ ಹಣ್ಣು, ಕಾಗದ, ರಬ್ಬರ್, ಎಲೆ, ಕಡ್ಡಿಯ ತುಂಡು, ತರಕಾರಿ ಮತ್ತು ಮರಗಳಿಂದ ಮಾಡದಿರುವ ವಸ್ತುಗಳಾದ ಪ್ಲಾಸ್ಟಿಕ್ ಗೊಂಬೆ, ಸ್ಟೀಲ್ ಪಾತ್ರೆಗಳು, ಇಟ್ಟಿಗೆ, ಕಲ್ಲು, ಸೀಮೆಸುಣ್ಣ, ಕಬ್ಬಿಣ ಇತ್ಯಾದಿ ವಿಭಿನ್ನ ಪ್ರಕಾರದ ವಸ್ತುಗಳನ್ನು ಒಂದು ಬುಟ್ಟಿಯಲ್ಲಿ ಸಂಗ್ರಹಿಸುವುದು.
ನಂತರ ಮಕ್ಕಳು ಒಬ್ಬೊಬ್ಬರಾಗಿ ಬಂದು ಆ ಬುಟ್ಟಿಯಲ್ಲಿ ಕೈಹಾಕಿ ಮರಗಳಿಂದ ಸಿಗುವ ವಸ್ತುಗಳನ್ನು ಒಂದು ಕಡೆ ಮತ್ತು ಮರಗಳಿಂದ ಸಿಗದಿರುವ ವಸ್ತುಗಳನ್ನು ಮತ್ತೊಂದು ಕಡೆ ವರ್ಗೀಕರಿಸಿ ಇಡಲು ಅನುಕೂಲ ಮಾಡಿಕೊಡುವುದು.
ಚಟುವಟಿಕೆಯ ನಂತರ: ಮರಗಳಿಂದ ನಮಗೆ ಯಾವೆಲ್ಲಾ ವಸ್ತುಗಳು ಸಿಗುತ್ತವೆ?, ಅವುಗಳನ್ನು ನಾವು ಎಲ್ಲಿ, ಹೇಗೆ ಬಳಸುತ್ತೇವೆ. ಮರಗಳು ಇಲ್ಲದಿದ್ದರೆ ಏನಾಗುತ್ತಿತ್ತು ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳೊಂದಿಗೆ ಚರ್ಚಿ ನಡೆಸಿ. – ಧನ್ಯವಾದಗಳು.
Activity 2 – Spot the things which we get from trees.
Teacher will collect different material in a basket where some material will be which we get from trees like fruits ,paper ,rubber,wood piece,vegetable etc and some material which we dont get from trees like plastic toy , steel utensil , pen etc. children needs to name the things we get from trees and separates them.
G2-EVS-LO-11-2-ನಿಮಗೆ ಗೊತ್ತಾ ಮರಗಳ ಮಹತ್ವ.MP3
ಹೆಚ್ಚುವರಿ ಸಂಪನ್ಮೂಲಗಳು : Additional resources :
https://storyweaver.org.in/en/stories/53100-every-tree-counts?mode=read
पेड़ों के लाभ|| पेड़ के लाभ|| 10 lines on trees in Hindi ||
त्यागी पेड़ कहानी | TREE’s SACRIFICE | Hindi Kahaniya for KIDS | StoryToons TV
ಅಭ್ಯಾಸ : Practice :
ಅಭ್ಯಾಸ ಹಾಳೆ -1 Practice Sheet -1
ಅಭ್ಯಾಸ ಹಾಳೆ -2 Practice Sheet –2