ಗ್ರೇಡ್- 2. ಥೀಮ್ – ನೈಸರ್ಗಿಕ ಸಂಪನ್ಮೂಲಗಳು
Grade- 2. Theme – Natural resources
G2-EVS-LO-13. ಭೂಮಿಯ ಮೇಲಿನ ಜೀವವನ್ನು ಉಳಿಸಿಕೊಳ್ಳಲು ವಿವಿಧ ಅಂಶಗಳ (ಭೂಮಿ, ಜಲಮೂಲಗಳು, ಆಕಾಶ, ಋತುಗಳು, ಅರಣ್ಯ, ಮರುಭೂಮಿಗಳು, ಪರ್ವತಗಳು, ಇತ್ಯಾದಿ) ಮಹತ್ವವನ್ನು ವಿವರಿಸಿ.
G2-EVS-LO-13. Describe significance of different elements (land, water bodies, sky, seasons, forest, deserts, mountains, etc) to sustain life on earth.
ಪರಿಚಯ :
ಚಟುವಟಿಕೆ -1
ಈ ಚಟುವಟಿಕೆಯ ಹೆಸರು : “ಭೂ ಸ್ವರೂಪಗಳ ಮಾದರಿ”
ಅಗತ್ಯ ಸಂಪನ್ಮೂಲಗಳು: ಖಾಲಿ ನೀರಿನ ಬಾಟಲ್, ರಟ್ಟಿನ ಬಾಕ್ಸ್, ಗಮ್/ಫೆವಿಕಾಲ್, ವೈಟ್ಸೀಮೆಂಟ್, ಕತ್ತರಿ, ಹಸಿರು ಉಲ್ಲನ್ ದಾರ, ಮರಳು, ಮಣ್ಣು, ನೀಲಿಬಣ್ಣ, ನೀರು, ನೀಲಿ, ಹಸಿರು ಬಣ್ಣದ ಕಾಗದಗಳು ಮತ್ತು ಹತ್ತಿ.
ಚಟುವಟಿಕೆಯನ್ನುಮಾಡುವವಿಧಾನ : ಶಿಕ್ಷಕರು ಮಕ್ಕಳೊಟ್ಟಿಗೆ ಸೇರಿ, ಕೊಟ್ಟಿರುವ ಯೂಟ್ಯೂಬ್ವೀಡಿಯೋವನ್ನು ಗಮನಿಸಿ, ನಂತರ ಭೂ ಸ್ವರೂಪಗಳ ಮಾದರಿನ್ನು ಮಾಡಲು ಮೊದಲಿಗೆ ವೀಡಿಯೋದಲ್ಲಿ ತೋರಿಸಿರುವಂತೆ ರಟ್ಟಿನ ಬಾಕ್ಸ್ ಮತ್ತು ಖಾಲಿ ನೀರಿನ ಬಾಟಲನ್ನು ಕತ್ತರಿಸಿಕೊಳ್ಳಿರಿ. ನಂತರ ಬೆಟ್ಟದ ಮಾದರಿಯನ್ನು ಮಾಡಲು ಕತ್ತರಿಸಿಕೊಂಡಿರುವ ನೀರಿನ ಬಾಟಲನ್ನು ರಟ್ಟಿನ ಮೇಲೆ ಇಟ್ಟು, ಬಾಟಲಿನ ಮೇಲೆ ಮತ್ತು ಸುತ್ತಲೂ ಬಿಳಿ ಸೀಮೆಂಟ್ ಹಾಕಿ ಬೆಟ್ಟ, ನದಿಯ ಮಾಡಿರಿ, ಆನಂತರ ಚಿಕ್ಕದಾಗಿ ಕತ್ತರಿಸಿರುವ ಹಸಿರು ಉಲ್ಲನ್, ಫೆವಿಕಾಲ್ ಬಳಸಿ ಹುಲ್ಲುಗಾವಲಿನ ಮಾದರಿ ಮಾಡಿರಿ. ನಂತರ ಫೆವಿಕಾಲ್ ಮತ್ತು ಮರಳನ್ನು ಬಳಸಿ ಮರುಭೂಮಿಯ ಮಾದರಿಯನ್ನು ಮಾಡಿ, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿರಿ. ಚೆನ್ನಾಗಿ ಒಣಗಿದ ನಂತರ ನದಿಯ ಮಾದರಿಗೆ ನೇರಳೆ ಬಣ್ಣವನ್ನು ಮತ್ತು ಬೆಟ್ಟದ ಮಾದರಿಗೆ ಕಂದು ಬಣ್ಣವನ್ನು ಹಾಕಿರಿ.ಆನಂತರ ಬೆಟ್ಟದ ಮಾದರಿ ಪಕ್ಕದ ರಟ್ಟಿಗೆ ನೀಲಿ ಬಣ್ಣದ ಆರಿಗಾಮಿ ಶೀಟ್ ಅಂಟಿಸಿ ಆಕಾಶದ ಮಾದರಿಯನ್ನು ಮಾಡಿ, ಅದರ ಮೇಲ್ಬಾಗದಲ್ಲಿ ಹತ್ತಿಯನ್ನು ಅಂಟಿಸಿ ಮೋಡದ ಮಾದರಿಯನ್ನು ಮಾಡಿರಿ.. ತದನಂತರ ಬಿಳಿ ಸಿಮೆಂಟ್, ಫೆವಿಕಾಲ್, ಮಣ್ಣನ್ನು ಬಳಸಿ ನದಿಯ ಮುಂಗಾಗದಲ್ಲಿ ದ್ವೀಪದ ಮಾದರಿಯನ್ನು ಮಾಡಿರಿ. ಆನಂತರ ರಟ್ಟು, ಗಮ್ ಮತ್ತು ಹಸಿರು ಬಣ್ಣದ ಶೀಟ್ ಬಳಸಿ ಮರ-ಗಿಡಗಳ ಮಾದರಿಗಳನ್ನು ಮಾಡಿ ಹುಲ್ಲುಗಾವಲು ಮತ್ತು ಬೆಟ್ಟದ ಮಾದರಿಯ ಅಕ್ಕ-ಪಕ್ಕದಲ್ಲಿ ಅಗತ್ಯವಿರುವ ಕಡೆ ಅಂಟಿಸಿ. ಕಳ್ಳಿಯ ಮಾದರಿಯನ್ನು ಮಾಡಿ ಮರುಭೂಮಿ ಭಾಗದಲ್ಲಿ ಅಲ್ಲಲ್ಲಿ ಇಡಲು ಮಕ್ಕಳಿಗೆ ಬೆಂಬಲಿಸಿರಿ.
ಚಟುವಟಿಕೆಯನಂತರ: ಭೂಸ್ವರೂಪಗಳಾದ ಬೆಟ್ಟ, ನದಿ, ಹಲ್ಲುಗಾವಲು, ಮರುಭೂಮಿ, ದ್ವೀಪ ಮುಂತಾದವುಗಳ ಬಗ್ಗೆ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ.-ಧನ್ಯವಾದಗಳು.
Introduction :
Activity:
Activity 1- Create a beautiful Earth.
Our earth consists of various water bodies and other landforms.Teacher can talk about the diversity of landforms and its importance in class.Discussion will be followed by the activity of creating a beautiful earth where teachers and children together will make different landforms to show how beautiful our mother earth is with all these . A Youtube video is attached for the teacher’s reference.
How to make landforms model | Easy way to make landform model | Easy landform
G2-EVS-LO-13-1-ಭೂ-ಸ್ವರೂಪಗಳ-ಮಾದರಿ.MP3
ಚಟುವಟಿಕೆ – 2
ಈ ಚಟುವಟಿಕೆಯ ಹೆಸರು : “ ಭೂಮಿ ಬಗ್ಗೆ ನಮಗೆಷ್ಟು ಗೊತ್ತು ”
ಅಗತ್ಯ ಸಂಪನ್ಮೂಲಗಳು:ಭೂಮಿ, ನೀರು, ಆಕಾಶ, ಗಾಳಿ, ಬೆಳಕು, ರಾತ್ರಿ, ಕಲ್ಲು, ಕಾಡು ಇತ್ಯಾದಿ ವಿವಿಧ ವಿಷಯಗಳನ್ನು ಬರೆದಿರುವಚೀಟಿಗಳು, ಒಂದು ಖಾಲಿಡಬ್ಬ, ಒಂದುಟೇಬಲ್ ಇತ್ಯಾದಿ.
ಚಟುವಟಿಕೆಯನ್ನು ಮಾಡುವವಿಧಾನ :ಭೂಮಿಗೆ ಸಂಬಂಧಿಸಿದ ಭೂಮಿ, ನೀರು, ಆಕಾಶ, ಗಾಳಿ, ಬೆಳಕು, ರಾತ್ರಿ, ಕಲ್ಲು, ಕಾಡು ಇತ್ಯಾದಿ ವಿವಿಧ ವಿಷಯಗಳನ್ನು ಚೀಟಿಗಳಲ್ಲಿ ಬರೆದು ಒಂದುಖಾಲಿ ಡಬ್ಬದಲ್ಲಿ ಹಾಕಿ, ನಂತರ ತರಗತಿಯಲ್ಲಿ ಟೇಬಲ್ ಹಾಕಿ ಒಂದು ವೇದಿಕೆ ಸಿದ್ಧಪಡಿಸಿ, ಒಬ್ಬೊಬ್ಬ ವಿದ್ಯಾರ್ಥಿಯನ್ನು ಆಹ್ವಾನಿಸಿ, ಆ ಡಬ್ಬದಲ್ಲಿನ ಒಂದು ಚೀಟಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿರುವ ವಿಷಯದ ಬಗ್ಗೆ ಒಂದು ನಿಮಿಷ ಮಾತನಾಡಲು ಎಲ್ಲಾಮಕ್ಕಳಿಗೂಅವಕಾಶ ಮಾಡಿಕೊಡಿರಿ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಅಪರಿಚಿತರೊಂದಿಗೆ ಮಾತನಾಡುವುದು ಸುಧಾರಣೆಯಾಗುತ್ತದೆ.
ಚಟುವಟಿಕೆಯ ನಂತರ:ಈ ಚಟುವಟಿಕೆಯಲ್ಲಿ ಭಾಗವಹಿಸುವ ಮೊದಲು ಮತ್ತು ಭಾಗವಹಿಸಿದ ನಂತರದ ಮಕ್ಕಳ ಅನುಭವವನ್ನು ಹಂಚಿಕೊಳ್ಳಲು ಬೆಂಬಲಿಸಿರಿ. – ಧನ್ಯವಾದಗಳು.
Activity 2 – Extempore on various topics given by teacher.
Topics can be
EARTH
LANDFORM
WATER
SEASON
SKY
DAY AND NIGHT
FOREST
Teacher can prepare the stage by putting stool in the class.Invite children one by one ,give one topic on earth and its features and let them speak about it for a minute. It gives them confidence and improves their public speaking. Teacher can also arrange mic if possible
G2-EVS-LO-13-2-ನಮ್ಮ ಭೂಮಿ ಬಗ್ಗೆ ನಮಗೆಷ್ಟು ಗೊತ್ತು.MP3
ಹೆಚ್ಚುವರಿ ಸಂಪನ್ಮೂಲಗಳು : Additional resources :
ऋतुएँ | हिंदी नैतिक कहानियाँ | Seasons In Hindi | Hindi Bal Katha | Moral Story In Hindi
Hindi Medium | CBSE | Class 2 EVS Our earth | ICSE | Science | FREE Tutorial
HINDI STORY ON EARTH DAY #save environment#save earth ( moral value story for kids)
ಅಭ್ಯಾಸ : Practice:
ಅಭ್ಯಾಸ ಹಾಳೆ – 1 Practise sheet – 1
ಅಭ್ಯಾಸ ಹಾಳೆ – 2 Practise sheet – 2