---
title: "6. ಆಹಾರ – ಅಡುಗೆ ಪ್ರಕ್ರಿಯೆ – ಭಾಗ-2"
description: "**ಗ್ರೇಡ್: 2        ಥೀಮ್ : ಆಹಾರ** ** ****G2-EVS-LO-6. ಅಡುಗೆ ಪ್ರಕ್ರಿಯೆಯನ್ನು ವಿವರಿಸಿ.** **G2-EVS-LO-6. Describe the process for cooking.** **ಪರಿಚಯ: Introduction:** [Grade 2 Food Process of cooking](https://www.youtube.com/embed/YpAdaxC7oXo?feature=oembed) **ಚಟುವಟಿಕೆ- Activity -** **ಚಟುವಟಿಕೆ-1 : ** **ಈ ಚಟುವಟಿಕೆಯ ಹೆಸರು****: ಬೇಯಿಸದ ಅಡುಗೆ** **ಅಗತ್ಯ ಸಂಪನ್ಮೂಲಗಳು:****ಚುರುಮುರಿ (ಪ್ರತಿ ನಾಲ್ಕು…"
url: "https://prajayatna.in/docs/6-%e0%b2%86%e0%b2%b9%e0%b2%be%e0%b2%b0-%e0%b2%85%e0%b2%a1%e0%b3%81%e0%b2%97%e0%b3%86-%e0%b2%aa%e0%b3%8d%e0%b2%b0%e0%b2%95%e0%b3%8d%e0%b2%b0%e0%b2%bf%e0%b2%af%e0%b3%86-%e0%b2%ad%e0%b2%be%e0%b2%97-2/"
updated: "2026-01-30"
---

# 6. ಆಹಾರ – ಅಡುಗೆ ಪ್ರಕ್ರಿಯೆ – ಭಾಗ-2

**ಗ್ರೇಡ್: 2        ಥೀಮ್ : ಆಹಾರ**

** ****G2-EVS-LO-6. ಅಡುಗೆ ಪ್ರಕ್ರಿಯೆಯನ್ನು ವಿವರಿಸಿ.**

**G2-EVS-LO-6. Describe the process for cooking.**

**ಪರಿಚಯ: Introduction:**

[Grade 2   Food   Process of cooking](https://www.youtube.com/embed/YpAdaxC7oXo?feature=oembed)

**ಚಟುವಟಿಕೆ- Activity -**

**ಚಟುವಟಿಕೆ-1 : **

**ಈ ಚಟುವಟಿಕೆಯ ಹೆಸರು****: ಬೇಯಿಸದ ಅಡುಗೆ**

**ಅಗತ್ಯ ಸಂಪನ್ಮೂಲಗಳು:****ಚುರುಮುರಿ (ಪ್ರತಿ ನಾಲ್ಕು ಮಕ್ಕಳಿಗೆ ಒಂದು ಲೀಟರ್‌), ಹುರಿದ ಕಡ್ಲೆಬೀಜ, ಉಪ್ಪು – ರುಚಿಗೆ ತಕ್ಕಷ್ಟು, ಈರುಳ್ಳಿ- 5-6, ಕ್ಯಾರೆಟ್ 4-5, ಟಮೋಟೋ 5-6, ಚಾಟ್‌ಮಸಾಲ-, ಕೊತ್ತಂಬ ರಿಸೊಪ್ಪು ಅರ್ಧಕಟ್ಟು, ನಿಂಬೆಹಣ್ಣು, ಖಾರದಪುಡಿ, ಬೋಗಾಣಿ/ಪಾತ್ರೆ/ಬಾಣಲಿ, ಸೌಟು, ಮಕ್ಕಳ ಸಂಖ್ಯೆಗೆ ಅನುಸಾರತಟ್ಟೆಗಳು.**

**ಚಟುವಟಿಕೆಯನ್ನು ಮಾಡುವ ವಿಧಾನ : ****ಬೇಲ್‌ಪೂರಿ ಮಾಡಲು ಬರುವ ಶಿಕ್ಷಕರು ಅಥವಾ ಅಡುಗೆ ಸಿಬ್ಬಂದಿಯವರು ಮಕ್ಕಳಿಗೆ ಮಾರ್ಗದರ್ಶನ ನೀಡುವುದು.**

**ತರಕಾರಿಗಳನ್ನು ತೊಳೆಯುವುದು ಮತ್ತು ಈರುಳ್ಳಿ ಕತ್ತರಿಸುವುದು, ಟೋಮ್ಯಾಟೋ ಕತ್ತರಿಸುವುದು, ಕ್ಯಾರೆಟ್‌ ತುರಿದುಕೊಳ್ಳುವುದು, ಕೊತ್ತಂಬರಿ ಕತ್ತರಿಸುವುದು ಹೀಗೆ ಎಲ್ಲಾ ಪೂರ್ವ ಸಿದ್ಧತೆಯನ್ನು ಮಕ್ಕಳನ್ನು ತೊಡಗಿಸುವುದರ ಮೂಲಕ ಮಾಡುವುದು.**

**ಒಂದು ದೊಡ್ಡ ಬೋಗಾಣಿ / ಪಾತ್ರೆ ಅಥವಾ ಬಾಣಲಿಯನ್ನು ತೆಗೆದುಕೊಳ್ಳುವುದು. ಅದರಲ್ಲಿ ಮೊದಲಿಗೆ ಚುರುಮುರಿ ಹಾಕುವುದು, ಆ ನಂತರ ಟೊಮಾಟೋ, ತುರಿದ ಕ್ಯಾರೆಟ್‌, ಕೊತ್ತಂಬರಿ, ಕಡಲೇ ಬೀಜ ಎಲ್ಲವನ್ನು ಅನುಕ್ರಮವಾಗಿ ಹಾಕಿ, ಉಪ್ಪು, ಖಾರದ ಪುರಿ ಹಾಕಿ, ನಿಂಬೆಹಣ್ಣನ್ನು ಹಿಂಡಿ ಎಲ್ಲವನ್ನೂ ಸೌಟಿನಿಂದ ತಿರುಗಿಸುತ್ತಾ ಮಿಶ್ರಣ ಮಾಡಬೇಕು. ಆ ನಂತರ ರುಚಿನೋಡಿ, ಉಪ್ಪು, ಹುಳಿ, ಖಾರದಲ್ಲಿ ಕಡಿಮೆ ಇದ್ದರೆ ಅದನ್ನು ಇನ್ನಷ್ಟು ಹಾಕುವುದು. ಹೀಗೆ ಮಿಶ್ರಣ ಮಾಡಿ ಸಿದ್ಧವಾದ ಭೇಲ್‌ಪುರಿಯನ್ನು ಎಲ್ಲಾ ಮಕ್ಕಳಿಗೂ ಹಾಗೂ ಶಿಕ್ಷಕರಿಗೂ ಹಂಚುವುದು ಮತ್ತು ಎಲ್ಲರೂ ಒಟ್ಟಿಗೆ ಕುಳಿದು ಸವಿಯಲು ಅನುಕೂಲ ಮಾಡಿಕೊಡುವುದು.**

**ಚಟುವಟಿಕೆಯ ನಂತರ:****ಮಕ್ಕಳು ಭೇಲ್‌ಪುರಿಯನ್ನು ಈ ಮೊದಲು ತಿಂದಿದ್ದಾರೆಯೇ? ನಾವು ಹೇಗೆ ಮಾಡಿದೆವು ಎಂಬ ವಿಧಾನವನ್ನು ಪುನರ್‌ ನೆನಪಿಸಿಕೊಳ್ಳಲು ಮತ್ತು ಅವರು ತಾವಾಗಿಯೇ ಯಾವುದಾದರೂ ಬೇಯಿಸದ ಅಡುಗೆ ಅಥವಾ ಪಾನೀಯವನ್ನು ಮಾಡಿದ್ದಾರೆಯೇ ಎಂದು ಕೇಳುತ್ತಾ ಮಕ್ಕಳು ತಮ್ಮ ಅನುಭವ ಹಂಚಿಕೊಳ್ಳಲು ಅನುಕೂಲ ಮಾಡಿಕೊಡುವುದು. ಮಕ್ಕಳು ನಿಂಬೆಹಣ್ಣಿನ ರಸವನ್ನು ಹೇಗೆ ಸಿದ್ಧಪಡಿಸಬಹುದು ಎಂದು ತಿಳಿದುಕೊಂಡು ಬರಲು ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಲು ತಿಳಿಸುವುದು.****  -****ಧನ್ಯವಾದಗಳು.**

**Activity -1 : little chef **

This activity is a cooking activity where children will prepare bhelpuri together.Teacher can ask children to get some basic ingredients like boiled chana ,murmura , salt, peanuts ,chat masala etc and they will mix all ingredients together to make tasty bhel puri. To make lemonade children can mix lemon juice ,sugar and salt. Entire class can have a small picnic with the bhelpuri and lemonade.During the whole activity the teacher can talk to them about cooking without fire and with fire.

Teacher can also ask children about their experience of cooking, who cooks at their home, what all things are cooked and what is their favourite food.

[G2-EVS-LO-6-1-ಬೇಯಿಸದ-ಅಡುಗೆ](https://drive.google.com/file/d/1wsg7ttiLSt9LtDL8bGeFRujOm-ij7A9g/view?usp=sharing)

ಚಟುವಟಿಕೆ-2 :     

ಸಂಭಾಷಣೆ ಕಾರ್ಡ್ ಆಯ್ಕೆಮಾಡಿ ಮತ್ತು ಮಾತನಾಡಿ.

 **Activity- 2** : 

Select a conversation card and talk. 

![](https://prajayatna.in/wp-content/uploads/2024/06/G2-EVSLO6-ACTIVITY-1-scaled.jpg)

******[Click to Download Worksheet](https://drive.google.com/file/d/1Jg0EruABJgMCaEuDNh5fBkGlu9E-tbPz/view?usp=sharing)******

ಶಿಕ್ಷಕರು ಸಂಭಾಷಣೆ ಕಾರ್ಡ್‌ಗಳನ್ನು ಸಿದ್ಧಪಡಿಸಿ, ಅವುಗಳನ್ನು ಮೇಜಿನ ಮೇಲೆ ಇಡಬೇಕು. ನಂತರ ಎಲ್ಲಾ ಮಕ್ಕಳು ಒಬ್ಬೊಬ್ಬರಾಗಿ ಬಂದು, ಒಂದೊಂದು ಕಾರ್ಡ್ ಅನ್ನು ಆಯ್ಕೆ ಮಾಡಿಕೊಂಡು, ಇಡೀ ತರಗತಿಯ ಮುಂದೆ ಒಂದು ನಿಮಿಷ ಮಾತನಾಡಲು ಬೆಂಬಲಿಸುವುದು. 

Teacher will prepare the conversation cards and place them on a table. One by one all children will come, select one card and talk for a minute in front of the whole class .

ಹೆಚ್ಚುವರಿ ಸಂಪನ್ಮೂಲಗಳು : 

**Additional resources:**

[https://storyweaver.org.in/en/stories/63168-food-of-tree?mode=read](https://storyweaver.org.in/en/stories/63168-food-of-tree?mode=read)

[**Hindi Medium | CBSE | Class 2 EVS Food and Health | ICSE | Science | FREE Tutorial**](https://www.youtube.com/watch?v=B7-ptTEFXJE)

**ಅಭ್ಯಾಸ:   Practice :**

**Practice sheet- 12      ಅಭ್ಯಾಸ ಹಾಳೆ -**2

![](https://prajayatna.in/wp-content/uploads/2024/06/G2-EVSLO6-Worksheet-1-scaled.jpg)

******[Click to Download Worksheet](https://drive.google.com/file/d/1-FuGBH5NjidjvkySu4gGKwhJpzZ0YEwJ/view?usp=sharing)******

**Practice sheet- 2       ಅಭ್ಯಾಸ ಹಾಳೆ - 2**

![](https://prajayatna.in/wp-content/uploads/2024/06/G2-EVSLO6-Worksheet-2-scaled.jpg)

******[Click to Download Worksheet](https://drive.google.com/file/d/16ZsgWWdQNq4b0wBH2XAUlHSk7jjim-B8/view?usp=sharing)******

 
